ಇಂಪೀರಿಯಲ್ ಕಡೆಟ್ ಕೋರ್ -
ಭಾರತದ ವೈಸ್‍ರಾಯಿಯಾದ ಲಾರ್ಡ್ ಕರ್ಜನ್ ಮಾಡಿದ ಸುಧಾರಣೆಗಳಲ್ಲಿ ಮುಖ್ಯವಾದ ಸೇನಾಸುಧಾರಣೆಗಳ ಅಂಗವಾಗಿ 1901ರಲ್ಲಿ ಸ್ಥಾಪಿಸಿದ ಸಾಮ್ರಾಜ್ಯಸೇನಾ ಛಾತ್ರದಳ. ಶ್ರೀಮಂತರ ಮತ್ತು ರಾಜರುಗಳ ವಂಶದಲ್ಲಿ ಹುಟ್ಟಿದ ತರುಣರನ್ನು ಪ್ರಾಥಮಿಕ ಸೈನ್ಯ ಶಿಕ್ಷಣ ದಳಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ಇದರ ಸೇವೆಯನ್ನು ಭಾರತದ ರಕ್ಷಣೆಗೆ ಮಾತ್ರ ಮೀಸಲಾಗಿಡದೆ ಹೆಚ್ಚಿನ ಕೆಲಸಗಳಿಗೂ ಉಪಯೋಗಿಸಲಾಯಿತು. ಚೀನಾ ದೇಶದ ಬಾಕ್ಸರ್ ದಂಗೆಕೋರರನ್ನು ಅಡಗಿಸುವುದಕ್ಕೂ ಸೋಮಾಲಿಲ್ಯಾಂಡಿನ ಮುಲ್ಲಾನನ್ನು ಸದೆಬಡಿಯುವುದಕ್ಕೂ ದಕ್ಷಿಣ ಆಫ್ರಿಕಾದ ನೆಟಾಲನ್ನು ರಕ್ಷಿಸುವುದಕ್ಕೂ ಈ ಸೈನಿಕರನ್ನು ಉಪಯೋಗಿಸಲಾಯಿತು. ಇವರು ಪರದೇಶಗಳಲ್ಲಿ ವೀರಾವೇಶದಿಂದ ಹೋರಾಡಿ ತಮಗೂ ತಮ್ಮ ದೇಶಕ್ಕೂ ಕೀರ್ತಿ ತಂದರು.			
(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ